ಕೇಳೇ ತಂಗಾಳಿ, ಹಾಡೇ ಸುವಾಲಿ,
ಆಸೆ ಎದೆಯಲ್ಲಿ ಮೈಮರೆಸೋ ಕ್ಷಣದಲ್ಲಿ,
ಹಾಡೇ ನಂಗು ಪ್ರೀತಿ ಲಾಲಿ,
ಸೇರೆ ನನ್ನ ಮನದ ಜೋಲಿ.....
ಕೇಳೇ ತಂಗಾಳಿ, ಹಾಡೇ ಸುವಾಲಿ,
ಆಸೆ ಎದೆಯಲ್ಲಿ ಮೈಮರೆಸೋ ಕ್ಷಣದಲ್ಲಿ,
ಹಾಡೇ ನಂಗು ಪ್ರೀತಿ ಲಾಲಿ,
ಸೇರೆ ನನ್ನ ಮನದ ಜೋಲಿ.....
ಕೇಳೇ ತಂಗಾಳಿ, ಹಾಡೇ ಸುವಾಲಿ..
ಗುಂಡಿಗೆಯ ಗೂಡ ತುಂಬ ನಿನ್ನ ಹೆಸರಿದೆ,
ಆ ಬೆಳ್ಳಿ ಮುಗಿಲ ಮೇಲೆಯೇ ಒಲವೆಂಬ ನಗುವಿದೆ...
ಓ ಪ್ರೀತಿ ಮೈನಾ ನಾ ನಿನ್ನ ಸೇರಲೇ,
ಆ ಚುಕ್ಕಿ ಚಂದ್ರನನ್ನ ಸರಮಾಡಿ ತೊಡಿಸಲೇ ...
ಓ ಪ್ರೀತಿ ಮೈನಾ ನಾ ನಿನ್ನ ಸೇರಲೇ,
ಆ ಚುಕ್ಕಿ ಚಂದ್ರನನ್ನ ಸರಮಾಡಿ ತೊಡಿಸಲೇ...
ಕಲ್ಪನೆಯ ಹಾದಿಲಿ ಹುಟ್ಟಿ ಬಾರೋ ಕನಸಲ್ಲಿ,
ಕಲ್ಪನೆಯ ಹಾದಿಲಿ ಹುಟ್ಟಿ ಬಾರೋ ಕನಸಲ್ಲಿ ...
ಹಾಡೇ ನಂಗು ಪ್ರೀತಿ ಲಾಲಿ,
ಸೇರೆ ನನ್ನ ಮನದ ಜೋಲಿ.....
ಕೇಳೇ ತಂಗಾಳಿ, ಹಾಡೇ ಸುವಾಲಿ..
ಶೃಂಗಾರ ರಾಗ ಲಹರಿಯಲ್ಲಿ ಪ್ರೇಮ ಸ್ವರವಿದೆ,
ಆ ಕೋಟಿ ಹೂಗಳ ನಡುವೆ ನಿನ್ನ ಚೆಲುವಿದೆ..
ನನ್ನಾಸೆ ಹೂವೆ ದುಂಬಿಯಾಗಿ ಬರಲೇ ನಾ,
ಮಕರಂದ ಹೀರಿ ನಿನ್ನ ಅನುಭಂದ ಬೆಸೆವೆ ನಾ...
ನನ್ನಾಸೆ ಹೂವೆ ದುಂಬಿಯಾಗಿ ಬರಲೇ ನಾ,
ಮಕರಂದ ಹೀರಿ ನಿನ್ನ ಅನುಭಂದ ಬೆಸೆವೆ ನಾ...
ತುಂತುರು ಮಳೆಯಲ್ಲಿ ಹಸಿರಿನ ನಡುವಲ್ಲಿ,
ತುಂತುರು ಮಳೆಯಲ್ಲಿ ಹಸಿರಿನ ನಡುವಲ್ಲಿ...
ಹಾಡೇ ನಂಗು ಪ್ರೀತಿ ಲಾಲಿ,
ಸೇರೆ ನನ್ನ ಮನದ ಜೋಲಿ.....
ಕೇಳೇ ತಂಗಾಳಿ, ಹಾಡೇ ಸುವಾಲಿ,
ಆಸೆ ಎದೆಯಲ್ಲಿ ಮೈಮರೆಸೋ ಕ್ಷಣದಲ್ಲಿ,
ಹಾಡೇ ನಂಗು ಪ್ರೀತಿ ಲಾಲಿ,
ಸೇರೆ ನನ್ನ ಮನದ ಜೋಲಿ.....
Lyrics Submitted by Sushma
Lyrics provided by https://damnlyrics.com/