Sneha Athi Madhura

Raju Ananthaswamy

ಸ್ನೇಹ ಅತಿ ಮಧುರ ಸ್ನೇಹ ಅದು ಅಮರ (೨)
ಸ್ನೇಹವೇ ಗುಡಿಯು ಪ್ರೀತಿಯೇ ದೇವರು (೨)
ಕಾಲ ವೇಷ ಮೀರಿದ ಭಾವ
ಸ್ನೇಹ ಅತಿ ಮಧುರ ಸ್ನೇಹ ಅದು ಅಮರ
=======================================
ಸ್ನೇಹಕೆ ವಯಸಿನ ಅಂತರವಿಲ್ಲ
ಸಿರಿತನ ಬಡತನ ಸೀಮೆಗಳಿಲ್ಲ (೨)
ಸ್ನೇಹಕೆ ಸ್ವಾರ್ಥದ ಆಸೆಗಳಿಲ್ಲ
ಸಮತೆ ಮಮತೆ ಸ್ನೇಹದ ಗಾನ
ಸ್ನೇಹ ಅತಿ ಮಧುರ ಸ್ನೇಹ ಅದು ಅಮರ
ಸ್ನೇಹ ಅತಿ ಮಧುರ ,,,,,
=======================================
ಓಡುವ ನದಿಗೆ ಮೋಡದ ಸ್ನೇಹ ಅರಳುವ
ಹೂವಿಗೆ ಕಿರಣದ ಸ್ನೇಹ (೨)
ಬಂಗಾರದ ಶಶಿಗೆ ಸಾಗರದ ಸ್ನೇಹ
ಒಲವು ನಲಿವು ಸ್ನೇಹದ ಚೆಲುವು
ಸ್ನೇಹ ಅತಿ ಮಧುರ ಸ್ನೇಹ ಅದು ಅಮರ (೨)
ಸ್ನೇಹವೇ ಗುಡಿಯು ಪ್ರೀತಿಯೇ ದೇವರು (೨)
ಕಾಲ ವೇಷ ಮೀರಿದ ಭಾವ
ಸ್ನೇಹ ಅತಿ ಮಧುರ ಸ್ನೇಹ ಅದು ಅಮರ
ಸ್ನೇಹ ಅತಿ ಮಧುರ ......

Lyrics Submitted by Uday Nanjappa

Lyrics provided by https://damnlyrics.com/