ಶ್ರೀಹರಿವಾಯು
ಇದೇ ಸಮಯ ರಂಗ ಬಾರೆಲೊ ||
ಇದೇ ಸಮಯ ಕೃಷ್ಣ ಬಾರೆಲೊ ||ಪ||
ಅತ್ತಿಗೆ ಲಕ್ಷ ಬತ್ತಿ ನೀಲಳೊ | ಅಷ್ಟು ಆಗದೆ ಅವಳು ಏಳಳೊ |
ಅತ್ತೆ ಪುರಾಣದಿ ಲೋಲಳೋ | ಸರಿ ಹೊತ್ತಿಗೆ ಮನೆಗೆ ಬರುವಳೊ ll
ಮಾವ ಎನ್ನಲ್ಲಿ ಅವಿಶ್ವಾಸಿಯೋ | ಮದುವೆಯಾದ ಗಂಡ ಬಲು
ಉದಾಸಿಯೊ || ಭಾವನು ಎನ್ನ ಕಂಡ್ರೆ ಸೇರನೊ| ನೀ ವೇಳಗೆ ಬಂದರೆ ವಾಸಿಯೊ ||
ತಂದೆ ತಾಯಿ ಆಸೆ ಮಾಡೆನೊ | ಎನ್ನ ಕಂದನ ಮೇಲೆ
ಮನಸಿಡೆನೋ || ಮಂದರಧರ ಶ್ರೀ *ಪುರಂದರ ವಿಠಲನ* |
ನೀ ಬಂದರೆ ಚರಣ ಸೇವೆ ಮಾಳ್ಪೆನೋ.
Lyrics Submitted by shrIharIvAyU
Lyrics provided by https://damnlyrics.com/