Uddarisuvudu

Dr. Vidyabhushana

ಉದ್ದರಿಸುವುದು ಎನ್ನ

✍️ ಸಾಹಿತ್ಯ ರಚನೆ :- ಶ್ರೀವಿಜಯದಾಸರು

ಉದ್ದರಿಸುವುದು ಎನ್ನ ಉದದಿಶಯನ ಬಿದ್ದೆ ನಿನ್ನಯ ಪಾದ ಪದ್ಮದ್ವಯಕೆ ಇಂದು
||ಪಲ್ಲವಿ||

ಅಂದು ನೀ ಪೇಳಿದಂದದಿ ತೀರ್ಥ ಯಾತ್ರೆಯನು ನಿಂದಿರದೆ ಸಂಚರಿಸಿ ಪುಣ್ಯವೆಲ್ಲ ತಂದು ||
ನಿನಗೆ ಅರ್ಪಿಸಿದೆ ಕೈಗೊಂಡು ಸಂತಸದಿ ||
ಮುಂದೆ ಎನಗೊಂದು ದಾರಿಯ ತೋರು ದೇವ |
||ಉದ್ದರಿಸುವುದು||

ಯಾತರವ ನಾನು ನಿನ್ನರಮನೆಯ ಗಾಯಕರ ದೂತರೆಂಜಲನುಂಡು ಬೆಳೆದ ನರನು||
ನೋಂತ ಪಲವಾಹುದೊ ನೀನೆ ಬಲ್ಲೆ ಜೀಯ ||
ಮಾತು ಮಾತಿಗೆ ಹಿಗ್ಗಿ ನಗುವ ಚನ್ನಿಗರಾಯ |
||ಉದ್ದರಿಸುವುದು||

ವೆಂಕಟಗಿರಿವಾಸ ವೇದವಂದಿತ ಚರಣ ಶಂಖ ಚಕ್ರ ಪಾಣಿ ಕರುಣಾಕರ ||
ಶಂಖ ನೃಪವರದ ಶ್ರೀವಿಜಯವಿಠಲ ||
ಅಂಕಜಮೇಲಾಡುವ ಬಾಲನೆಂದು ಬಿಡದೆ |
||ಉದ್ದರಿಸುವುದು||

Lyrics Submitted by ರಾಜೇಶ್ ಎಚ್ ಎಸ್ ಮಿತ್ಯಾಂತ

Lyrics provided by https://damnlyrics.com/