ಅಮ್ಮ ನಿನ್ನ ಹೆಸರಿನಲ್ಲಿ ಎಂಥ ಸವಿಯು ಅಡಗಿದೆ
ಮಧುರ ಭಾವ ಸುತ್ತ ಹರಡಿ
ಹಳೆಯ ನೆನಪ ತರುತಿದೆ "2"
ಎಷ್ಟು ಕಷ್ಟವಾ ಪಟ್ಟೆಯಮ್ಮ
ನಿನ್ನ ಕಂದ ಬೆಳೆಯಲು "2"
ಬಿಸಿಲು ಚಳಿಗೆ ಬಾಡದ೦ತೆ
ಅವಿಚಿಕೊ೦ಡೆ ಮಡಿಲೊಳು
ಅಮ್ಮ....ಅಮ್ಮ.....
ಅಮ್ಮ ನಿನ್ನ ಹೆಸರಿನಲ್ಲಿ ಎಂಥ ಸವಿಯು ಅಡಗಿದೆ
ಮಧುರ ಭಾವ ಸುತ್ತ ಹರಡಿ
ಹಳೆಯ ನೆನಪ ತರುತಿದೆ "2"
ಮುಖದ ತುಂಬಾ ಮಂದಹಾಸ
ಹಿಂದೆ ದುಃಖದಲೆಗಳು "2"
ಹೆಗೆ ಸಹಿಸಿಕೊಂಡೆಯಮ್ಮ
ನೋವಿನ ಆ ದಿನಗಳು
ಅಮ್ಮ ನಿನ್ನ ಹೆಸರಿನಲ್ಲಿ ಎಂಥ ಸವಿಯು ಅಡಗಿದೆ
ಮಧುರ ಭಾವ ಸುತ್ತ ಹರಡಿ
ಹಳೆಯ ನೆನಪ ತರುತಿದೆ
ಅಳುವ ನು೦ಗಿ ನಗುನಗುತಲಿ
ಪ್ರೀತಿ ಅಮೃತ ಹುಡಿದೆ
ಹೇಗೆ ಋಣವ ತೀರಿಸಲೇ
ಹಾದಿ ತಿಳಿಯದಾಗಿದೆ
ಅಮ್ಮ.....ಅಮ್ಮ.....
ಅಮ್ಮ ನಿನ್ನ ಹೆಸರಿನಲ್ಲಿ ಎಂಥ ಸವಿಯು ಅಡಗಿದೆ
ಮಧುರ ಭಾವ ಸುತ್ತ ಹರಡಿ
ಹಳೆಯ ನೆನಪ ತರುತಿದೆ
ಅಮ್ಮ ನಿನ್ನ ಹೆಸರಿನಲ್ಲಿ ಎಂಥ ಸವಿಯು ಅಡಗಿದೆ
ಮಧುರ ಭಾವ ಸುತ್ತ ಹರಡಿ
ಹಳೆಯ ನೆನಪ ತರುತಿದೆ
Lyrics Submitted by Yashaswini
Lyrics provided by https://damnlyrics.com/