ಆ ಆ ಆ ಆ ಆ ಆ ಆ ಆ
ಚಿತ್ರ : ಕಾಮನಬಿಲ್ಲು
ಕಣ್ಣು ಕಣ್ಣು ಕಲೆತಾಗ
ಕಣ್ಣು ಕಣ್ಣು ಕಲೆತಾಗ
ಮನವು ಉಯ್ಯಾಲೆಯಾಗಿದೆ ತೂಗಿ
ಹೃದಯ ಬಿಡಲಾರೆ ಎಂದಿದೆ ಕೂಗಿ
ಕಣ್ಣು ಕಣ್ಣು ಕಲೆತಾಗ
ಮನವು ಉಯ್ಯಾಲೆಯಾಗಿದೆ ತೂಗಿ
ಹೃದಯ ಬಿಡಲಾರೆ ಎಂದಿದೆ ಕೂಗಿ
♬♬♬♬♬♬♬♬♬♬♬♬♬♬♬♬♬♬
ಹೊಸ ಸುಖ ಕಾಣುತಿದೆ
ಹೊಸ ಕನಸಾಗುತಿದೆ
ಹೊಸ ಬಯಕೆಯು ಮೂಡುತಿದೆ
ಹೊಸ ಹೊಸ ಭಾವನೆ
ಹೊಸ ಹೊಸ ಕಲ್ಪನೆ
ಹೊಸ ಲೋಕಕೆ ಸೆಳೆಯುತಿದೆ
ಆಹಾ ಏನೋ ಹೇಳೋ ಆಸೆ
ಆಹಾ ಏನೋ ಕೇಳೋ ಆಸೆ
ನಾಚಿಕೆ ತಡೆಯುತಿದೆ
ಆಹಾ ಏನೋ ಹೇಳೋ ಆಸೆ
ಆಹಾ ಏನೋ ಕೇಳೋ ಆಸೆ
ನಾಚಿಕೆ ತಡೆಯುತಿದೆ
ಕಣ್ಣು ಕಣ್ಣು ಕಲೆತಾಗ
ಮನವು ಉಯ್ಯಾಲೆಯಾಗಿದೆ ತೂಗಿ
ಹೃದಯ ಬಿಡಲಾರೆ ಎಂದಿದೆ ಕೂಗಿ
♬♬♬♬♬♬♬♬♬♬♬♬♬♬♬♬♬♬
ಮೈ ನವಿರೇಳುತಿದೆ
ತನು ಹೂವಾಗುತಿದೆ
ಮನ ಕವಿತೆಯ ಹಾಡುತಿದೆ
ನಿನ್ನ ಮನ ಹಾಡಿರುವ
ಸವಿ ನುಡಿ ಸಾಲುಗಳ
ಈ ಕಂಗಳೆ ಹೇಳುತಿವೆ
ಈ ಮಾತು ಎಂತ ಚೆನ್ನ
ಈ ನೋಟ ಎಂತ ಚೆನ್ನ
ನಿನ್ನ ಪ್ರೇಮಕೆ ನಾ ಸೋತೆ
ಈ ಮಾತು ಎಂತ ಚೆನ್ನ
ಈ ನೋಟ ಎಂತ ಚೆನ್ನ
ನಿನ್ನ ಪ್ರೇಮಕೆ ನಾ ಸೋತೆ
ಕಣ್ಣು ಕಣ್ಣು ಕಲೆತಾಗ
ಮನವು ಉಯ್ಯಾಲೆಯಾಗಿದೆ ತೂಗಿ
ಹೃದಯ ಬಿಡಲಾರೆ ಎಂದಿದೆ ಕೂಗಿ
ಕಣ್ಣು ಕಣ್ಣು ಕಲೆತಾಗ
ಮನವು ಉಯ್ಯಾಲೆಯಾಗಿದೆ ತೂಗಿ
ಹೃದಯ ಬಿಡಲಾರೆ ಎಂದಿದೆ ಕೂಗಿ
Lyrics Submitted by Prasanna kumar
Lyrics provided by https://damnlyrics.com/