damnlyrics.com

Aadi Baa Nanakanda

ಯಾಕಳುವೆ ಎಲೆರಂಗ ಬೇಕಾದ್ದು ನಿನಗೀವೆ

ನಾಕೆಮ್ಮೆ ಕರೆದ ನೊರೆ ಹಾಲು| ಸಕ್ಕರೆ

ನೀ ಕೇಳಿದಾಗ ಕೊಡುವೇನು||

ಯಾತಕಳುತಾನೆಂದು ಎಲ್ಲಾರು ಕೇಳ್ಯಾರು

ಕಾಯದ ಹಾಲ ಕೆನೆ ಬೇಡಿ| ಕಂದಯ್ಯ

ಕಾಡಿ ಕೈಬಿಟ್ಟು ಇಳಿದಾನ||

ಅಳುವ ಕಂದನ ತುಟಿಯು ಹವಳದ ಕುಡಿಹಂಗೆ

ಕುಡಿಹುಬ್ಬು ಬೇವಿನೆಸಳಂಗೆ| ಕಣ್ಣೋಟ

ಶಿವನ ಕೈಯಲಗು ಹೊಳೆದಂತೆ||

ಅತ್ತರೆ ಅಳಲವ್ವ ಈ ಕೂಸು ನನಗಿರಲಿ

ಕೆಟ್ಟರೆ ಕೆಡಲಿ ಮನೆಗೆಲಸ| ಕಂದನಂತ

ಮಕ್ಕಳಿರಲವ್ವ ಮನೆತುಂಬ||

ಜೋಗೂಳ ಹಾಡಿದರೆ ಆಗಲೇ ಕೇಳ್ಯಾನು

ಹಾಲ ಹಂಬಲವ ಮರೆತಾನು| ಕಂದಂಗೆ

ಜೋಗೂಳದಾಗೆ ಅತಿಮುದ್ದು||

ಅತ್ತು ಕಾಡುವನಲ್ಲ ಮತ್ತೆ ಬೇಡುವನಲ್ಲ

ಎತ್ತಿಕೊಳ್ಳೆಂಬ ಹಟವಿಲ್ಲ| ನಿನ್ನಂತ

ಹತ್ತು ಮಕ್ಕಳೂ ಇರಬಹುದು||

ಆಡಿ ಬಾ ಎನ್ನ ಕಂದ ಅಂಗಾಲ ತೊಳೆದೇನ

ತೆಂಗಿನ ಕಾಯಿ ತಿಳಿನೀರ| ತಕ್ಕೊಂಡು

ಬಂಗಾರದ ಮೊರೆ ತೊಳೆದೇನ||

ಕೂಸು ಇದ್ದ ಮನೆಗೆ ಬೀಸಣಿಗೆ ಯಾತಕೆ

ಕೂಸು ಕಂದಯ್ಯ ಒಳ ಹೊರಗ| ಆಡಿದರೆ

ಬೀಸಣಿಗೆ ಗಾಳಿ ಸುಳಿದಾವ||

ಹಾಲ್ಬೇಡಿ ಅತ್ತಾನ ಕೋಲಬೇಡಿ ಕುಣದಾನ

ಮೊಸರ್ಬೇಡಿ ಕೆಸರ ತುಳದಾನ|

ನನ ಕಂದನ ಕುಶಲಾದ ಗೆಜ್ಜಿ ಕೆಸರಾಗಿ

ಅತ್ತರ ಅಳಲವ್ವ ಈ ಮುತ್ತ ನನಗಿರಲಿ

ಕೆಟ್ಟರ ಕೆಡಲಿ ಮನಿಗೆಲಸ |

ಸಮರ್ಥನಂಥ ಮಕ್ಕಲಿರಲೆವ್ವ ಮನಿಯಾಗ

ಅಕಿ ನನ್ನ ಶಿವಾನಿ ಮಾತೀಲಿ ಶ್ಯಾನ್ಯಾಕಿ

ಮಾತ ಮಾತೀಗಿ ನಗುವಾಕಿ | ಶಿವಾನಿ

ಮಾತ ಬಲ್ಲವರ ಮಗಳವ್ವ

ಅತ್ತರ ನನ ಕಂದನ ಮುತ್ತೆಲ್ಲಿ ಉದರ್ಯಾವ

ಸತ್ತೀಗಿ ಮಾನೆದ ಹೊಲದಾಗ |

ಅವರನ್ನ ಸುಪ್ಪಲಿ ಒಯ್ದ ಬಳತಂದ

ಅತ್ತ ಕಾಡವನಲ್ಲ ಮತ್ತ ಬೇಡವನಲ್ಲ

ಮೆತ್ತನ್ನ ಎರಡು ಕೈ ಮುಟಗಿ (ಸ್ಯಾಂಡ್ವಿಚ್) ಕೊಟ್ಟರೆ

ಗಪ್ಪುಚಿಪ್ಪಾಗಿ ಮಲಗ್ಯಾನ

ಯಾತರ್ಯಾತರ ಗಾಳಿ ಎಳೆಯ ತೋಟದ ಗಾಳಿ

ಸುತ್ತಲೂ ಗಾಳಿ ಸುಳಿಗಾಳಿ | ನನ ಕಂದನ

ನಿನ್ನ ತೊಟ್ಟಿಲ ಗಾಳಿ ಮನೆತುಂಬಾ

ಅಳಬುರುಕ ಗಿಳುಬುರುಕ ಇದ ಎಂಥ ಮಗನವ್ವ

ಉಣಗೊದದ ರೊಟ್ಟಿ ಸುದಗೊದದ | ನನ ಮಗನ

ಎತ್ತಿ ಕೊಲ್ಲವರು ಯಾರಿಲ್ಲ

ಮಾಳಿಗೆ ಮನೆ ಬೇಕ ಜೋಳಿಗೆ ಹಣ ಬೇಕ

ರಾಮದೇವರಂತ ಮಗ ಬೇಕ |

ನಮ್ಮನಿಗೆ ಜಾನಕಿಯಂತ ಸೊಸೆ ಬೇಕು

ಉಪ್ಪರಿಗೆ ಮನೆ ಬೇಕ ಕೊಪ್ಪರಿಗೆ ಹಣ ಬೇಕ

ಕೃಷ್ಣದೇವರಂತ ಮಗ ಬೇಕ | ನನ ಸಮರ್ಥ

ನಮ್ಮನಿಗೆ ರುಕ್ಮಿಣಿಯಂತ ಸೊಸೆ ಬೇಕ

ಸಂಗಮಕ ಹೋಗಾಕ ಸಂಗಾಟ ಮಗ ಬೇಕ

ತಂಬಿಗಿ ಹಿಡಿಯಾಕ ಸೋಸಿ ಬೇಕ |

ಕೂಡಲ ಸಂಗಮಕ ಹೋಗಿ ಬರಬೇಕ

ಬಾಲಕರಿಲ್ಲದ ಬಾಲಿದ್ಯಾತರ ಜನ್ಮ

ಬಾಡಿಗಿ ಎತ್ತು ದುಡಿಧಂಗ |

ಬಾಳೆಲಿ ಹಾಸುಂದ ಬೀಸಿ ಒಗೆಧಂಗ

Lyrics Submitted by Mohan Irkal

Enjoy the lyrics !!!