damnlyrics.com

Aidu Beralu

ಐದು ಬೆರಳು ಕೂಡಿ ಒಂದು ಮುಷ್ಠಿಯು

ಹಲವು ಮಂದಿ ಸೇರಿ ಈ ಸಮಷ್ಠಿಯು

ಬೇರೆ ಬೇರೆ ಒಕ್ಕಲು

ಒಂದೇ ತಾಯ ಮಕ್ಕಳು

ಕೂಡಿ ಹಾಡಿದಾಗ ಗೆಲುವು ಗೀತೆಗೆ

ಭರತಮಾತೆಗೆ ಭರತಮಾತೆಗೆ

ಮೊಳಗಲಿ ಮೊಳಗಲಿ ನಾಡಗೀತವು

ಮೂಡಲಿ ಮೂಡಲಿ ಸುಪ್ರಭಾತವು ||ಪ||

ಹಿಮಾಲಯದ ನೆತ್ತಿಯಲ್ಲಿ, ಕಾಶ್ಮೀರದ ಭಿತ್ತಿಯಲ್ಲಿ

ಅಸ್ಸಾಮಿನ ಕಾಡಿನಲ್ಲಿ, ಐದು ನದಿಯ ನಾಡಿನಲ್ಲಿ

ಹೊತ್ತಿ ಉರಿವ ಬೆಂಕಿ ಆರಿ ತಣ್ಣಗಾಗಲಿ

ಬಂಜರಲ್ಲಿ ಬೆಳೆದು ಹಚ್ಚ ಹಸಿರು ತೂಗಲಿ

ಗಂಗೆ ತುಂಗೆ ಕಾವೇರಿಯು ತಬ್ಬಿಕೊಳ್ಳಲಿ

ಮೊಳಗಲಿ ಮೊಳಗಲಿ ನಾಡಗೀತವು

ಮೂಡಲಿ ಮೂಡಲಿ ಸುಪ್ರಭಾತವು ||೧||

ಲಡಾಕ ನೇಫ ಗಡಿಗಳಲ್ಲಿ, ಮಂತ್ರಾಲಯ ಗುಡಿಗಳಲ್ಲಿ

ಭತ್ತ ಗೋಧಿ ಬೆಳೆಯುವಲ್ಲಿ, ಪ್ರೀತಿಯು ಮೈ ತಳೆಯುವಲ್ಲಿ

ದುಡಿವ ಹಿಂದೂ ಮುಸಲ್ಮಾನರೊಂದುಗೂಡಲಿ

ಆರದಿರಲಿ ಪ್ರೀತಿ ದೀಪ ಕಣ್ಣಗೂಡಲಿ

ಎದೆಯ ಕೊಳೆಗಳನ್ನು ಅಶ್ರುಧಾರೆ ತೊಳೆಯಲಿ

ಮೊಳಗಲಿ ಮೊಳಗಲಿ ನಾಡಗೀತವು

ಮೂಡಲಿ ಮೂಡಲಿ ಸುಪ್ರಭಾತವು ||೨||

Lyrics Submitted by Akshata Satish

Enjoy the lyrics !!!