damnlyrics.com

Bayalinolage

ಬಯಲಿನೊಳಗೆ ಯಾರೋ ಮರೆತ ಶೃತಿ ಮಾಡಿದ ವೀಣೆಯ

ಬಯಲಿನೊಳಗೆ ಯಾರೋ ಮರೆತ ಶೃತಿ ಮಾಡಿದ ವೀಣೆಯ

ನುಡಿಸಬಹುದು ಸ್ವಪ್ನ ಲೋಲೆ

ನುಡಿಸಬಹುದು ಸ್ವಪ್ನ ಲೋಲೆ

ಧ್ಯಾನವತೀ... ವಾಣಿಯ

ಬಯಲಿನೊಳಗೆ ಯಾರೋ ಮರೆತ ಶೃತಿ ಮಾಡಿದ ವೀಣೆಯ

ಉಕ್ಕಿನುಗುರ ಎದೆಗೆ ಒತ್ತಿ

ಮೀಟಿ ಕರುಣೆಯಿಲ್ಲದೆ

ಉಕ್ಕಿನುಗುರ ಎದೆಗೆ ಒತ್ತಿ

ಮೀಟಿ ಕರುಣೆಯಿಲ್ಲದೆ

ಕರುಳು ಬಳ್ಳಿ ಜಗ್ಗದಿರಲು

ಕರುಳು ಬಳ್ಳಿ ಜಗ್ಗದಿರಲು

ಹಾಡು ಮೂಡ ಬಲ್ಲುದೆ

ಹಾಡು ಮೂಡ ಬಲ್ಲುದೆ

ಬಯಲಿನೊಳಗೆ ಯಾರೋ ಮರೆತ ಶೃತಿ ಮಾಡಿದ ವೀಣೆಯ

ಮೀಟುವವರು ನೀವೆ ನಿಜ

ನಿಮ್ಮದೇನೆ ಹಸ್ತವು

ಮೀಟುವವರು ನೀವೆ ನಿಜ

ನಿಮ್ಮದೇನೆ ಹಸ್ತವು

ತೊಡೆಯ ಮೇಲೆ ಎತ್ತಿಕೊಂಡು

ತೊಡೆಯ ಮೇಲೆ ಎತ್ತಿಕೊಂಡು

ಬಗಿವುದೇ ಪ್ರಶಸ್ತವು

ಬಯಲಿನೊಳಗೆ ಯಾರೋ ಮರೆತ ಶೃತಿ ಮಾಡಿದ ವೀಣೆಯ

ಎಷ್ಟು ನೋವ ತಿಂದರೂ ವೀಣೆ ನೊಂದೆ ಎನ್ನದೂ

ಎಷ್ಟು ನೋವ ತಿಂದರೂ ವೀಣೆ ನೊಂದೆ ಎನ್ನದೂ

ಪೀಡಿಸುವವರು ನೀವೆ ಆದರೂ

ಪೀಡಿಸುವವರು ನೀವೆ ಆದರೂ

ಹಾಡು ಮಾತ್ರ ಅದರದು

ಹಾಡು ಮಾತ್ರ ಅದರದು

ಬಯಲಿನೊಳಗೆ ಯಾರೋ ಮರೆತ ಶೃತಿ ಮಾಡಿದ ವೀಣೆಯ

ಬಯಲಿನೊಳಗೆ ಯಾರೋ ಮರೆತ ಶೃತಿ ಮಾಡಿದ ವೀಣೆಯ

ನುಡಿಸಬಹುದು ಸ್ವಪ್ನ ಲೋಲೆ

ನುಡಿಸಬಹುದು ಸ್ವಪ್ನ ಲೋಲೆ

ಧ್ಯಾನವತೀ... ವಾಣಿಯ

ಬಯಲಿನೊಳಗೆ ಯಾರೋ ಮರೆತ ಶೃತಿ ಮಾಡಿದ ವೀಣೆಯ

ಶೃತಿ ಮಾಡಿದ ವೀಣೆಯ

ಶೃತಿ ಮಾಡಿದ ವೀಣೆಯ

Lyrics Submitted by ಸುಪ್ರಿಯಾ S

Enjoy the lyrics !!!