ಚಂದಿರ ತಂದ ಹುಣ್ಣಿಮೆ ರಾತ್ರಿ
ಗಾಳಿಯು ತಂದ ತಣ್ಣನೆ ರಾತ್ರಿ
ಹಾಯಾಗಿ ನಾ ಮಲಗಿರಲು
ಈ ದಿಂಬು ಹಾಸಿಗೆ ನನ ನೂಕಿತು
ಈ ನನ್ನ ನಲ್ಲನ ಕೂಗೆಂದಿತು
ಚಂದಿರ ತಂದ ಹುಣ್ಣಿಮೆ ರಾತ್ರಿ
ಗಾಳಿಯು ತಂದ ತಣ್ಣನೆ ರಾತ್ರಿ
ಹಾಯಾಗಿ ನಾ ಮಲಗಿರಲು
ಈ ನನ್ನ ಮಂಚವು ಮಾತಾಡಿತು
ನಿನ್ನನ್ನು ಆಚೆಗೆ ನೂಕೆಂದಿತು(||)
ಏನು ತೊಂದರೆ ಅಲ್ಲಿ ಬಂದರೆ ಸೇವೆ ಮಾಡುವೆನು
ಹೂವನು ಹಾಸಿ ನಿನ್ನ ಮಲಗಿಸಿ ಲಾಲಿ ಹಾಡುವೆನು
ಮೈಯ ಮುಟ್ಟದೇ, ಕೈಯ ಎಳೆಯದೇ ದೂರ ನಿಲ್ಲುವೆಯಾ ?
ನನ್ನ ನೆಮ್ಮದಿ ಹಾಳು ಮಾಡದೇ ಹೊರಗೆ ಹೋಗುವೆಯಾ?
ಭಾರೀ ಬ್ರಹ್ಮಚಾರಿ ನೀನು ಬಲ್ಲೇ ಎಲ್ಲಾ
ಹೆಣ್ಣೆ ನಿನ್ನ ಆರೋಗ್ಯ ಸರಿಯಾಗಿಲ್ಲ
ಪ್ರೀತಿ ಎಂದರೆ ಗೊತ್ತೇ ಇಲ್ಲ
ನನಗೆ ಪ್ರೀತಿಯೇ ಬೇಕಾಗಿಲ್ಲ
ಬೇಡವೆಂದರೂ ನಾ ಬಿಡುವುದೆ ಇಲ್ಲ
ಅತ್ತೆಕಂಡರೆ ಮಾವ ಬಂದರೆ ಮಾನಾ ಹೋಗುವುದು
ಅಪ್ಪನು ರೇಗಿ ಗದರಿಸಿದಾಗ ಏನು ಹೇಳುವುದು
ಏಕೆ ಹೆದರುವೆ ಕದವ ಹಾಕುವೆ ಏನೂ ಕೇಳಿಸದು
ಸದ್ದು ಮಾಡದೇ ದೀಪ ಆರಿಸು ಏನೂ ಕಾಣಿಸದು
ನಿನ್ನ ಹೆಣ್ಣು ಅಂದೋರಿಗೆ ಬುದ್ಧಿ ಇಲ್ಲ
ಏನೇ ಹೇಳು ನಿನ್ನ ಬಿಟ್ಟು ಬಾಳೋದಿಲ್ಲ
ಕೋಪ ಬಂದರೇ ಸುಮ್ಮನಿಲ್ಲಾ
ಆಗಲೇ ನೀನು ಚೆನ್ನಾ ನಲ್ಲಾ
-ಸಾದಿಖ್ ಗಡಿನಾಡು
Lyrics Submitted by Sadiq gadinadu