damnlyrics.com

Kande Kande Vadirajara

ಕಂಡೆ ಕಂಡೆ ವಾದಿರಾಜರ ಶ್ರೀ ಹಯವದನನ ಪಾದ ಪುಂಡರೀಕ ಪೂಜಿಸುವವರ ll

ಭಂಡ ಮತಗಳ ತುಂಡುಮಾಡಿ ಭೂಮಂಡಲವ ಜರಿಸೀ

ಚಂಡ ಪ್ರಚಂಡ ಶ್ರೀ ಪಾಂಡುರಂಗನ ಪ್ರೀತಿ ಪಡೆದ ವೀರರ ಪ್ರೀತಿ ಪಡೆದ ವೀರರಾ ll1ll

ಅನೇಕ ಶಾಸ್ತ್ರವ ಅನಾಯಾಸದಿಂದ ಸನಾತರಿಗೆ ಪೇಳಿ

ಅನೂಕೂಲ ವರ ಗೋಕುಲ ವಾಸಗೆ ಪ್ರಣಾಮ ಮಾಡಿದ ಧೀರರಾll2ll

ಶೂರತನದಲಿ ವೀರಸೇನನ ಗರ್ವವನೆ ಮುರಿದಾ

ಧೀರಾಲಕ್ಷ್ಮಿ ನಾರಸಿಂಹನ ಸಾರಿಪೊಗಳಿದ ವೀರರಾll3ll

Enjoy the lyrics !!!