damnlyrics.com

Koti Koti Namana Ninage

ಕೋಟಿ ಕೋಟಿ ನಮನ ನಿಮಗೆ ಮಹಾ ಗಣಪತಿ

ಲಕ್ಷ್ಯ ಲಕ್ಷ್ಯ ದೀಪಾರ್ಚನೆ ದಿವ್ಯ ಗಣಪತಿ ||2||

ಮಹಾ ಗಣಪತಿ ದಿವ್ಯ ಗಣಪತಿ ಮಹಾ ಗಣಪತಿ ||

1)ಇಳಿದು ಬಾ ಇಳಿದು ಬಾ ಇಳಿದು ಬಾ ಗಣಪತಿ

ಕೈಲಾಸ ಗಿರಿಯಿಂದ ಧರೆಗಿಳಿದು ಬಾ ||2||

ಬೆಳಗಿ ಬಾ ಹೊಳೆದು ಬಾ ಬೆಳಗಿ ಬಾ ಹೊಳೆದು ಬಾ ಗಣಪತಿ ಗಣಪತಿ

ಮುತ್ತಿರುವ ಕತ್ತಲನ್ನು ದೂರ ಮಾಡು ಬಾ

ಮುತ್ತಿರುವ ಕತ್ತಲನ್ನು ದೂರ ಮಾಡು ಬಾ ಬಾ ಬಾ ಬಾ ||ಕೋಟಿ ಕೋಟಿ |

2)ಅಕ್ಕರೆಯ ಆಕಾರ ಮೈ ತಳೆದು ಬಾ

ಸೌಮ್ಯದ ಸಾಕಾರ ಮೂರ್ತಿಯಾಗಿ ಬಾ

ನಲಿದು ಬಾ ಒಲಿದು ಬಾ

ನಲಿದು ಬಾ ಒಲಿದು ಬಾ ಗಣಪತಿ ಗಣಪತಿ

ಇಳೆಯತ್ತ ಹರುಷವನ್ನು ಹರಸುತ್ತ ಬಾ

ಇಳೆಯತ್ತ ಹರುಷವನ್ನು ಹರಸು ಹರಸು

ಬಾ ಬಾ ಬಾ ಬಾ ||ಕೋಟಿ ||

3)ಕೈ ಮುಗಿದು ಬೇಡುತ್ತಿರುವೆ ಕರುಣಾಕರ

ಲೋಕ ರಕ್ಷಕ ಹೇ ವಿಗ್ನೇಶ್ವರ

ಕೈ ಮುಗಿದು ಬೇಡುತಿರುವೆ ಕರುಣಾಕರ

ಲೋಕ ರಕ್ಷಕ ಹೇ ವಿಗ್ನೇಶ್ವರ

ನಮ್ಮ ಎದೆಯಲಿ ನಮ್ಮ ನೆಲದಲಿ

ನಮ್ಮ ಎದೆಯಲಿ ನೆಲದಲಿ

ಗಣಪತಿ ಗಣಪತಿ

ಸದಾ ಇದ್ದು ನಮ್ಮನ್ನು ಹರಸುತ್ತಾ ಬಾ

ಸದಾ ಇದ್ದು ನಮ್ಮನ್ನು ಹರಸು ಹರಸು ಬಾ

ಬಾ ಬಾ ಬಾ ||ಕೋಟಿ ಕೋಟಿ ||

Enjoy the lyrics !!!