damnlyrics.com

MADHUREGE HODHANU

ಮಧುರೆಗೆ ಹೋದನು ಮಾಧವ (×2)

ಬರುವನೋ ಬಾರನೋ ಹೋದವ

ಮಧುರೆಗೆ ಹೋದನು ಮಾಧವ (×2) ||ಪ||

ಗೋಕುಲದಲಿ ಪದ ಉಳಿದವು (×2)

ರಾಗಗಳೆಲ್ಲೋ ಕಳೆದವು

ಗೋಕುಲದಲಿ ಪದ ಉಳಿದವು

ರಾಗಗಳೆಲ್ಲೋ ಕಳೆದವು (×2) ||೧||

ಬಾನ ನೆಲುವಿನಲಿ ನವನೀತ (×2)

ಮರಳುವನೇ ಹೋದವನೀತ

ಬಾನ ನೆಲುವಿನಲಿ ನವನೀತ

ಮರಳುವನೇ ಹೋದವನೀತ (×2) ||೨||

ಅಳುತಿದೆ ಹೃದಯವು ಶ್ಯಾಮನಿಗೆ (×2)

ತಡೆಯುಂಟೇ ನಿಸ್ಸೀಮನಿಗೆ

ಅಳುತಿದೆ ಹೃದಯವು ಶ್ಯಾಮನಿಗೆ

ತಡೆಯುಂಟೇ ನಿಸ್ಸೀಮನಿಗೆ (×2) ||೩||

ಮಧುರೆಗೆ ಹೋದನು ಮೋಹನ...

ಮಧುರೆಗೆ ಹೋದನು ಮೋಹನ...

ಕಾದೆ ಇದೆ ಬೃಂದಾವನ...

Lyrics Submitted by Pratap Bhatt

Enjoy the lyrics !!!