damnlyrics.com

Mukhya Prana Enna

ಮುಖ್ಯಪ್ರಾಣ ಎನ್ನ ಮೂಲಗುರುವೇ

ರಕ್ಕಸಾಂತಕ ಶ್ರೀ ರಾಮನ ನಿಜದಾಸ ||ಪ||

ತಂದೆ ನೀನೇ ಎನಗೆ ತಾಯಿ ನೀನೇ ಎನಗೆ

ಬಂಧು ನೀನೇ ಎನಗೆ ಬಳಗ ನೀನೇ

ಎಂದೆಂದಿಗೂ ನಮ್ಮ ಎಲ್ಲರ ರಕ್ಷಿಪನು ನೀನೇ ||ಪ||

ದಾತ ನೀನೇ ಎನಗೆ ಕರ್ತ ನೀನೇ ಎನಗೆ

ವಿತ್ತ ನೀನೇ ಎನಗೆ ವಿಭವ ನೀನೇ

ಸತ್ಯ ನೀನೇ ಸದಾಚಾರವು ನೀನೇ ||ಪ||

ಸುಖವು ನೀನೇ ಎನಗೆ ಸುಲಭ ನೀನೇ ಎನಗೆ

ಶ್ರೀಕಾಂತ ಶ್ರೀ ಪುರಂಧರವಿಠಲರಾಯನ

ಏಕಾಂತ ಭಕುತನು ನಿಜದಿ ನೀನೇ ||ಪ||

Lyrics Submitted by Shreesh Kumar Baglody

Enjoy the lyrics !!!