damnlyrics.com

Udaya Gaganadali

ಉದಯ ಗಗಣದಲಿ ಅರುಣನ ಛಾಯೆ

ಜಗದ ಜೀವನಕೆ ಚೇತನ ವೀಯೆ

ನಿನ್ನಯ ಗಾನದ ಸುಮಧುರ ಮಾಯೆ

ಬನದಿಂದoಬರ ಕೇರುವುದು

ಕೋರಿಕೆಗಳ ಬಾಯಾರುವುದು

ಪ್ರಭಾತ ಮೌನವ ನೆಚ್ಚರ ಮಾಡಿ

ಕಾಡುನಾಡುಗಳು ತುಂಬಿ ತುಳುಕಾಡಿ

ಜಗ್ಗನ್ನಿದ್ರೆಗೆ ಜೋಗುಳ ಹಾಡಿ

ಬ್ರಹ್ಮವನೆ ತೂಗಾಡುವುದು

ಕ್ರಾಂತಿಗೆ ಶಾoತಿಯ ನೀಡುವುದು

ಓ ವನಗಾಯಕ ವರವಾದೀಶ

ನಿನ್ನಯ ಕಾನನ ಕೂಜನ ಪಾಶ

ಸ್ಮರಚಾಪಕೆ ನೀ ಸ್ವರಬಾಣ

ಕೇಳಿದರಲ್ಲವೇ ತಿಳಿಯದು ನಿನ್ನ

ಕಂಠದ ವೈಕಲಿ ತುದಿಯಲಿ ನನ್ನ

ಸಾವಿನ ಬಯಕೆಯು ನಿನ್ನ ಧಾನ

ನಿನಗೆ ನಮೋ ಓ ಕಾಜಾಣ

Lyrics Submitted by Vindhya R

Enjoy the lyrics !!!