damnlyrics.com

Yendu kaambeno Nanda Gopana

ಎಂದು ಕಾಂಬೆನೊ ನಂದ ಗೋಪನ ಕಂದ ಶ್ರೀ ಗೋವಿಂದನ

ಮಂದರಾಚಲಧರ ಯದುಕುಲ ಚಂದ್ರ ಗುಣಗಣ ಸಾಂದ್ರನ

ವಿಜಯ ಸೂತನ ವಿಶ್ವಪಾಲನ ಭುಜಗವರ ಪರ್ಯಂಕನ

ರಜನಿಚರರಳಿದ ಜನಕನ ತ್ರಿಜಗಪತಿ ದ್ವಿಜಗಗಮನನ

ಪಾಲದಧಿ ನವನೀತ ಚೋರನ ಬಾಲಕೃಷ್ಣ ಗೋಪಾಲನ

ಶೈಲರೆರಳಿಲಿ ತಾಳಿ ಗೋಕುಲ ಪಾಲಿಸಿದ ಪರಮಾತ್ಮನ

ಭಾಮೆ ರಕ್ಮಿಣಿ ರಮಣ ರಂಗನ ಸಾಮಗಾನವಿಲೋಲನ

ಶ್ರೀ ಮದಾನಂದ ಮುನಿಕರಾಚೀತ ಶ್ಯಾಮಸುಂದರ ವಿಠ್ಠಲನ

Lyrics Submitted by Dr shrikant konapur

Enjoy the lyrics !!!