damnlyrics.com

Yenu Saarthaka

ಏನು ಸಾರ್ಥಕ ಬದುಕೀ ಏನು ಸಾರ್ಥಕ

ಧ್ಯಾನ ಕಿಶನ ಧ್ಯಾನ ಮಾಡದೆ ನಾನು ಎಂಬುವ ಹೀನ ಬದುಕಿ//ಅ.ಪ //

ಎಳೆ ಎಳೆ ದನಿಯ ತುಳಸಿ ದಳ ತಂದು ಭಕುತಿಯಿಂದ/

ಜಲಜನಾಭನ ಚರಣ ಕಮಲಗಳಿಗೆ ಅರ್ಪಿಸದವನು//

ಹೊತ್ತರೆದ್ದು ಕ್ರಮದಲಿಂದ ಮೃತ್ತಿಕೆ ಸೌಚಾದೀ ಕರ್ಮ

ನಿತ್ಯ ಮಾಡ ಹರಟೆ ಬಡೆದು ಹೊತ್ತು ಗಳಯಹುತಿಹನು//

ಪತ್ನಿ ಜರೆದು ಅನ್ಯ ಸತಿಯ ರತ್ನ ಸಮನ ತಿಳಿದು ಹರಿಯ

ನರ್ತನದಿಂದ ಪಾಡಿ ಸುಗತಿ ಯತ್ನ ಮಾಡದವನು//೧//

ಮಾತೃ ಪಿತೃ ಗಳಿಗೆ ಮೀರಿ ಬ್ರಾಹತ್ರುಗಳೋಲು ವಂಚಿಸುತಲಿ

ಶ್ರೋತ್ರಿಯರನು ಅಳಿದು ನಿರಯ ಪಾತ್ರನಾಗುವವನು//

ದಂಭಕದಲಿ ಮಡಿಯ ಮಾಡಿ ನಂಬಿದವರ ಕೆಡಿಸಿ ತಾನೇ

ಉಂಬುವುದಕೆ ಪರರ ಹಾನಿ ಹಂಬಲಿಸುತಲಿಹನು//

ಭೇದ ಮತವ ಪೊಂದದಲೇ ಮೇದ ಮಧ್ಯ ಭಕ್ಷಿಸುತ

ಕುಚೋದ್ಯದಿಂದ ತಂದೆ ತಾಯಿ ಶ್ರಾದ್ಧ ಮಾಡದವನು ಬದುಕಿ//೨//

ಕಾರ್ತಿಕಾದೀ ಸ್ನಾನ ಹೋಮ ಪಾರ್ಥ ಸಖನ ದಿವ್ಯವಾದ ಮೂರ್ತಿಗಳಿಗೆ ಧೂಪ ಮಂಗಳಾರತಿ ಮಾಡದವನು//

ಮಾಧವನ್ನ ರೂಪಗಳಿಗೆ ಬೇಧವಿಲ್ಲ ವೆಂದು ತಿಳಿದು

ಸಾದರದಲಿ ಪೂಜಿಸಿ ಪ್ರಸಾದ ಉಣ್ಣದವನು/

ಪ್ರಾಣೇಶ ವಿಠಲsss ಪೇಳದದನು ಧ್ಯಾನಕೆ ತರದೇ

ಅನ್ಯಶಾಸ್ತ್ರ ಸಾನುರಾಗದೀ ಕೇಳಿ ಸುಖಿಪ ಹೀನ ಬುದ್ಧಿ ನರನು ಬದುಕಿ//೩//

Lyrics Submitted by Hanamantrao

Enjoy the lyrics !!!