INDU NINNA MAREYA HOKKE - Puttur Narasimha Nayak



     
Page format: Left Center Right
Direct link:
BB code:
Embed:

INDU NINNA MAREYA HOKKE Lyrics


Indu Ninna Moreya Hokke - ಇಂದು ನಿನ್ನ ಮೊರೆಯ ಹೊಕ್ಕೆ
ರಾಗ - ಸುರಟಿ
ತಾಳ - ತ್ರಿಪುಟ
ರಚನೆ - ಪುರಂದರ ದಾಸರು
ಇಂದು ನಿನ್ನ ಮೊರೆಯ ಹೊಕ್ಕೆ ವೆಂಕಟೇಶನೇ |
ಎಂದಿಗಾದರೆನ್ನ ಕಾಯೋ ಶ್ರೀನಿವಾಸನೇ || ಪಲ್ಲವಿ || || ಇಂದು ||
ಶೇಶಗಿರಿಯ ವಾಸ ಶ್ರೀಶ ದೋಶರಹಿತನೇ |
ಏಸು ದಿನಕು ನಿನ್ನ ಪಾದ ದಾಸನು ನಾನೆ |
ಕ್ಲೇಶ ಗೈಸದಿರು ಎನ್ನ ಸ್ವಾಮಿಯು ನೀನೇ || ಇಂದು ||
ಕಮಲ ನಯನ ಕಾಮ ಜನಕ ಕರುಣ ವಾರಿಧೇ |
ರಮೆಯ ನಾಥ ಕಮಲ ನಾಥ ಹೇ ದಯಾನಿಧೇ |
ಯಮನ ಪುರದಿ ಶಿಕ್ಷಿಸದಿರು ಪಾರ್ಥ ಸಾರಥಿಯೇ || ಇಂದು ||
ಉರಗ ಶಯನ ಸುರರಿ ಗೊಡೆಯ ಸಿರಿಯ ರಮಣನೇ |
ಶರಣ ಪಾಲ ಬಿರುದು ತೋರಿ ಪೊರೆವ ದೇವನೇ |

ಕರುಣಿಸೆನಗೆ ಮುಕುತಿಯ ಪುರಂದರ ವಿಠ್ಠಲನೇ || ಇಂದು ||
Lyrics Submitted by Girija Muralidhara

Enjoy the lyrics !!!