Bareyada Mounada Kavithe - Sparsha
| Page format: |
Bareyada Mounada Kavithe Lyrics
ಬರೆಯದ ಮೌನದ ಕವಿತೆ
ಹಾಡಾಯಿತು
ಎದೆಯಲಿ ನೆನಪಿನ ನೋವು ಸುಖ
ತಂದಿತು
ಬರೆಯದ ಮೌನದ ಕವಿತೆ
ಹಾಡಾಯಿತು
ಎದೆಯಲಿ ನೆನಪಿನ ನೋವು ಸುಖ
ತಂದಿತು
ಹೃದಯದಿ ಪ್ರೇಮ ತರಂಗ ನೀ
ಮೀಟಿದೆ
ಬದುಕಿಗೆ ನೂತನ ಅರ್ಥ ನೀ
ನೀಡಿದೆ
ಸುಮಧುರ ಅನುಭವ ನೂರು ನಾ
ನೋಡಿದೆ
ನೆಡೆಯುವ ಮುಂದಿನ ದಾರಿ
ಮರೆ ಎಂದಿದೆ ನಡೆ ಎಂದಿದೆ
ಗುರಿ ತೋರಿದೆ
ಹೃದಯದಿ ಪ್ರೇಮ ತರಂಗ ನೀ
ಮೀಟಿದೆ
ಬದುಕಿಗೆ ನೂತನ ಅರ್ಥ ನೀ
ನೀಡಿದೆ
ಹೂವ ಕಂಪು ಪರರಿಗಾಗಿ ಸಕಲ
ಜನ್ಮವು
ಪರರ ಬಾಳು ಬೆಳಗಿದಾಗ ಬಾಳು
ಪೂರ್ಣವು
ಕಾಲ ಬರೆದ ಹೊಸತು ಹಾಡು
ಹಾಡಲಾರೆನು
ಮನದ ಪುಟದೀ ಬರೆದ ಗೀತೆ
ಮರೆಯಲಾರೆನು
ಎಲ್ಲಿಯ ಬಂದವು ಕಾಣೆ
ಬೆಸೆಯಿತು ಜೀವಕೆ ಜೀವ
ಅರ್ಪಣೆ ಮಾಡುವೆ ನಿನಗೆ
ನನ್ನ ಈ ಹೃದಯದ ಭಾವ
ಬರೆಯದ ಮೌನದ ಕವಿತೆ
ಹಾಡಾಯಿತು
ಎದೆಯಲಿ ನೆನಪಿನ ನೋವು ಸುಖ
ತಂದಿತು
ಸುಮಧುರ ಅನುಭವ ನೂರು ನಾ
ನೋಡಿದೆ
ನೆಡೆಯುವ ಮುಂದಿನ ದಾರಿ
ಮರೆ ಎಂದಿದೆ ನಡೆ ಎಂದಿದೆ
ಗುರಿ ತೋರಿದೆ
ಯಾವ ಹೂವು ಯಾರ ಮುಡಿಗೊ
ಅವನ ಆಟದೀ
ಚೈತ್ರ ಬಂದು ಹೋಯಿತ್ತಮ್ಮ
ನನ್ನ ತೋಟದೀ
ತಂತಿ ಹರಿದ ವೀಣೆಯಲ್ಲಿ
ಶೃತಿಯು ತಂದಿತು
ನುಡಿಸುವವನು ಸ್ವರವ
ಬೆರಸಿ ಸಾಟಿ ಕಾಣೆನು
ಬಾಳಲಿ ಪಡೆದದು ಏನೋ
ಅರಿಯದೆ ಕಳೆದುದು ಏನೋ
ಕಾಣದ ಕೈಗಳ ಸ್ಪರ್ಶ ಮುಂದೆ
ತರುವುದು ಏನೋ
ಹೃದಯದಿ ಪ್ರೇಮ ತರಂಗ ನೀ
ಮೀಟಿದೆ
ಬದುಕಿಗೆ ನೂತನ ಅರ್ಥ ನೀ
ನೀಡಿದೆ
ಸುಮಧುರ ಅನುಭವ ನೂರು ನಾ
ನೋಡಿದೆ
ನೆಡೆಯುವ ಮುಂದಿನ ದಾರಿ
ಮರೆ ಎಂದಿದೆ ನಡೆ ಎಂದಿದೆ
ಗುರಿ ತೋರಿದೆ
Lyrics Submitted by Shiva Chetan K S