Kattutheva Naavu - Pichchalli Srinivas



     
Page format: Left Center Right
Direct link:
BB code:
Embed:

Kattutheva Naavu Lyrics


ಕಟ್ಟುತ್ತೇವ ನಾವು, ಕಟ್ಟುತ್ತೇವ ನಾವು
ಕಟ್ಟೇ ಕಟ್ಟುತ್ತೇವ ||೨||
ಒಡೆದ ಮನಸುಗಳ, ಕಂಡ ಕನಸುಗಳ
ಕಟ್ಟೇ ಕಟ್ಟುತ್ತೇವ, ನಾವು ಮನಸ ಕಟ್ಟುತ್ತೇವ||
ಜಾತಿಯಿಲ್ಲದ, ಭೀತಿಯಿಲ್ಲದ
ನಾಡ ಕಟ್ಟುತೇವ.....|೨|
ಕುಲವೆನ್ನದ ಮನುಷ್ಯ ಕುಲದ
ಹಾಡ ಬರೆಯುತೆವ, ಈ ನೆಲದ ಹಾಡ ಬರೆಯುತೆವ||೨||
ಗೋಳಿಲ್ಲದ, ಗುಂಡಿಲ್ಲದ
ನಾಡ ಕಟ್ಟುತೇವ ||೨||
ನೂರು ಮನಸಿನ, ಕೋಟಿ ಕನಸಿನ
ಹಾಡ ಬರೆಯುತೆವ, ಈ ನೆಲದ ಹಾಡ ಬರೆಯುತೆವ ||೨||
ಸಮಸಮಾಜದ ಕನಸ ಹೊತ್ತು
ನಾವು ಕುಂಡ ತುಳಿಯುತೇವ|
ರಕ್ತಗಾಲಿನ ನಮ್ಮ ಪಾಲಿನ

ಹಾಡಬರೆಯುತೆವ, ಈ ನೆಲದ ಹಾಡು ಬರೆಯುತೆವ ||೨||
- ಸತೀಶ ಕುಲಕರ್ಣಿ
Lyrics Submitted by Suma Angadi

Enjoy the lyrics !!!