DamnLyrics - The center provides all the lyrics

Sri Venkatachala Nivasa - Narasimha Nayak



     
Page format: Left Center Right
Direct link:
BB code:
Embed:

Sri Venkatachala Nivasa Lyrics


ಶ್ರೀ ವೇಂಕಟಾಚಲ ನಿವಾಸ ನಾ ನಿನ್ನ
ಸೇವಾನುಸೇವಕರ ದಾಸ ಎನಿಸಿ
ಜೀವಿಸುವ ನರಗೆ ಆಯಾಸ ಯಾಕೆ
ಶ್ರೀವರನೆ ಕೊಡು ಎನಗೆ ಲೇಸಾ
ಸ್ವಾಮಿ ಕಂಸಾರಿ ಪ್ರಭು ನಿನ್ನ ದಿವ್ಯ
ನಾಮ ಒದಗಲು ಜಿಹ್ವೆಗೆನ್ನ ದೋಷ
ಸೀಮೆಗಾಣದಿದ್ದರೆನ್ನ ಸ್ವಾಮಿ
ನೀ ಮರೆಯಲಾಗದೊ ಸುಪ್ರಸನ್ನ
ನೀಚ ಯೋನಿಗಳಲ್ಲಿ ಬಂದೆ ಇನ್ನು
ನಾಚಿಕಿಲ್ಲವೊ ಎನಗೆ ತಂದೆ ನೀನೆ
ಮೋಚಕನು ಬಿನ್ನಪವಿದೆಂದೆ ಸವ್ಯ
ಸಾಚಿಸಖ ಕೈಪಿಡಿಯೋ ಮುಂದೆ
ನಾನೊಬ್ಬನೇ ನಿನಗೆ ಭಾರ ಆದೆ
ನೇನೊ ಸಂತತ ನಿರ್ವಿಕಾರ ಎನ್ನ
ಹೀನತ್ವ ನೋಡಲ್ಕಪಾರ ಚಕ್ರ
ಪಾಣಿ ಮಾಡಿದಿರೆನ್ನ ದೂರ
ಕಂಡ ಕಂಡವರಿಗಾಲ್ಪರಿದು ಬೇಡಿ
ಬೆಂಡಾದೆ ನಿನ್ನಂಘ್ರಿ ತೊರೆದು ದಿಟ

ತೊಂಡವತ್ಸಲನೆಂಬ ಬಿರುದು ಕಾಯೊ
ಪುಂಡರೀಕಾಕ್ಷ ನೀನರಿದು
ಈ ಸಮಯದೊಳಗೆನ್ನ ತಪ್ಪ ನೋಡಿ
ನೀ ಸಡಿಲ ಬೇಡುವರೇನಪ್ಪ ನಿನ್ನ
ದಾಸರ್ಪೆಸರ್ಗೊಳಲು ಬಪ್ಪ ದೋಷ
ನಾಶವಾಗೋದು ತಿಮ್ಮಪ್ಪ
ಕಾಮಾದಿಗಳ ಕಾಟದಿಂದ ನಿನ್ನ
ನಾ ಮರೆದೆ ಸಚ್ಚಿದಾನಂದ ಎನ್ನ
ಈ ಮಹಾ ದೋಷಗಳ ವೃಂದ ನೋಡದೆ
ನೀ ಮನ್ನಿಸೆನ್ನ ಮುಕುಂದ
ನೀ ಪಿಡಿದರೆ ಸಹಸ್ರಾರ ಸುಜನ
ಪಾಪಾಟವಿಗೆ ಸುಕುಠಾರಾ ಜಗ
ದ್ವ್ಯಾಪಕನೆ ಎನ್ನ ಸಂಸಾರ ಘೋರ
ಕೂಪದಿಂದೆತ್ತಯ್ಯ ಧೀರ
ಸಿಂಧೂರ ರಾಜ ಪರಿಪಾಲ ಕೋಟಿ
ಕಂದರ್ಪ ಲಾವಣ್ಯ ಶೀಲ ಧರ್ಮ
ಮಂದಾರ ಭೂಜಾಲವಾಲ ಯೋಗಿ
ಸಂದೋಹ ಹೃತ್ಕುಮುದ ಶೀಲಾ
ಶಿವನ ವೈರಿಯ ಕೊಂದ ಶಕ್ತ ಪುಣ್ಯ
ಶ್ರವಣ ಕೀರ್ತನ ನಿನ್ನ ಭಕ್ತ ಜನರ
ಭವದೊಳಗೆ ದಣಿಸುವುದು ಯುಕ್ತವೇನೊ
ಭುವನ ಪಾವನ ನಿತ್ಯಮುಕ್ತ
ಶ್ರೀಕರ ಶ್ರೀಮದಾನಂತ ನಿಖಿಳ
ಲೋಕೈಕನಾಥ ನಿನ್ನಂಥ ಸಖರ
ನಾ ಕಾಣೆನೆಲ್ಲೂ ಮಹಾಂತಾ ಎನ್ನ
ನೀ ಕಾಯೋ ಕಂಡ್ಯ ಭೂಕಾಂತಾ
ಕರ ಕರ್ಮ ಚಿತ್ತತ್ವಗ್ರಸನ ಕಾಯ
ಕರಣ ಮನಹಂಕಾರ ಘ್ರಾಣ ಬುದ್ಧಿ
ಚರಣ ಪಾಯೂಪಸ್ಥ ನಯನಜಾತ
ಉರುಪಾಪಿ ಕ್ಷಮಿಸು ಶ್ರೀ ರಮಣಾ
ಅನಿಮಿತ್ತ ಬಂಧು ನೀಯೆನ್ನ ಬಿಡುವು
ದನುಚಿತವೋ ಲೋಕಪಾವನ್ನಚರಿತ
ಮನ ವಚನ ಕಾಯದಲಿ ನಿನ್ನ ಪಾದ
ವನಜ ನಂಬಿದೆ ಸುಪ್ರಸನ್ನಾ
ನೀನಲ್ಲದೆನಗೆ ಗತಿಯಿಲ್ಲ ಪವ
ಮಾನವಂದಿತ ಕೇಳೋ ಸೊಲ್ಲ ಎನ್ನ
ಜ್ಞಾನ ಇಚ್ಛೆ ಕ್ರಿಯೆಗಳೆಲ್ಲ ನಿನ್ನ
ಧೀನವಲ್ಲವೆ ಲಕ್ಷ್ಮೀನಲ್ಲಾ
ಪ್ರಾಚೀನ ಕರ್ಮಾಂಧಕೂಪದೊಳಗೆ
ಯೋಚಿಸುವ ನರರ ಸಂತಾಪ ನಿನಗೆ
ಗೋಚರಿಸದೇನೋ ಬಹುರೂಪ ವೇಂಕ
ಟಾಚಲನಿಲಯ ಪಾಹಿ ಶ್ರೀಪಾ
ಯಾಕೆ ದಯ ಬಾರದೆನ್ನಲ್ಲಿ ನರಕ
ನಾಕ ಭೂ ಲೋಕಂಗಳಲ್ಲಿ ಚರಿಸಿ
ನಾ ಕಷ್ಟಪಟ್ಟ ಬಗ್ಗೆ ನೀ ಬಲ್ಲಿ ವೀತ
ಶೋಕ ಕೊಡು ಭಕುತಿ ನಿನ್ನಲ್ಲಿ
ನಿನ್ನಂಘ್ರಿ ದರುಶನವ ಕೊಡದೆ ಹೀಗೆ
ಬನ್ನ ಬಡಿಸುವರೇನೋ ಬಿಡದೆ ನಾನು
ಮುನ್ನ ಮಾಡಿದ ಪಾಪ ಕೆಡದೆ ನೀ ಪ್ರ
ಪನ್ನ ವತ್ಸಲನೆಂದು ನುಡಿದೆ
ತಾಪತ್ರಯಗಳಿಂದ ನೊಂದೆ ಮಹಾ
ಪಾಪಿಷ್ಠರಲ್ಲನ್ನ ತಿಂದೆ ಇನ್ನು
ಆಪರೇತೇಶ್ವರನ ಮುಂದೆ ಪೋಗಿ
ನಾ ಪೇಳಿಕೊಳಲೇನು ತಂದೆ
ದೇಹ ಸಂಬಂಧಿಗಳ ಸಹಿತವಾಗಿ
ನಾ ಹೊಂದಿದೆನು ಲೋಕಮಹಿತ ಎನ್ನ
ಮೋಹಿಪುದು ನಿನಗೇನು ವಿಹಿತ ಹೃದಯ
ಬಾಹಿರಂತರದಿ ಸನ್ನಿಹಿತ
ಪೋಗುತಿದೆ ದಿವಸ ಕಮಲಾಕ್ಷ ಪರಮ
ಯೋಗೇಶ ನಿನ್ನ ಅಪರೋಕ್ಷ ಎನಗೆ
ಹ್ಯಾಗಾಗುವುದೊ ಸುರಾಧ್ಯಕ್ಷ ದುರಿತ
ನೀಗು ಕಾಮಿತ ಕಲ್ಪವೃಕ್ಷ
ಗತಿಯಾರು ನಿನ್ನುಳಿದು ದೇವ ರಮಾ
ಪತಿ ನೀನೆ ಭಕ್ತ ಸಂಜೀವ ಎನ್ನ
ಸತಿಸುತರ ಅನುದಿನದಿ ಕಾವ ಭಾರ
ಸತತ ನಿನ್ನದು ಮಹಾನುಭಾವ
ದೊಡ್ಡವರ ಕಾಯ್ವುದೇನರಿದು ಪರಮ
ದಡ್ಡರನು ಕಾಯ್ವುದೇ ಬಿರುದು ಎನ್ನ
ಗುಡ್ಡದಂತಿಹ ಪಾಪ ತರಿದು ಕಾಯೋ
ವಡ್ಡಿ ನಾಯಕ ಸಾರೆಗರದೊ
ಜ್ಞಾನಿಗಳು ನೀಚರಲಿ ಕರುಣ ಮಾಡ
ರೇನೋ ಬಿಡುವರೇ ರಥಚರಣ ಪಾಣಿ
ಭಾನು ಚಂಡರವಿಕಿರಣ ಬಿಡದೆ
ತಾನಿಪ್ಪನೆ ರಮಾರಮಣ
ಆಡಲ್ಯಾತಕೆ ಬಹಳ ಮಾತಾ ಪರರ
ಬೇಡಲಾರೆನೋ ಜಗತ್ರಾತಾ ಹೀಗೆ
ಮಾಡುವರೇ ಕೇಳೆನ್ನ ಮಾತ ನೀನೆ
ನೀಡೆನಗೆ ಪುರುಷಾರ್ಥ ದಾತಾ
ಬೇಡಲ್ಯಾತಕೆ ಬಹಳ ಮಾತಾ ಎನ್ನ
ಕೇಡು ನಿನ್ನದಲ್ಲೇ ಬಲಿಧೌತ ಪಾದ
ಬೇಡಿಕೊಂಬುವೆ ನಾನು ನಾಥ ದೂರ
ನೋಡಲಾಗದು ಪಾರ್ಥಸೂತ
ಸಾರಸದ್ಭಕ್ತಿಯಲಿ ನಿತ್ಯ ಬಿಡದೆ
ಶಾರದೇಶನ ತುತಿಪ ಭಕ್ತಜನರ
ಪಾರ ಸಂತೈಸುವುದು ಮಿಥ್ಯವಲ್ಲ
ಶ್ರೀರಮಣ ಸಾಕ್ಷಿದಕೆ ಸತ್ಯ
ಫಣಿರಾಜಶಯನ ಪರಿಯಂಕ ಶಯನ
ಪ್ರಣತಾರ್ತಿಹರನೆಂಬೊ ಅಂಕ ಕೇಳಿ
ಮಣಿದೆ ನಿನ್ನಂಘ್ರಿಗೆ ಶಶಾಂಕ ಭಾಸ
ದಣಿಸಲಾಗದು ನಿಷ್ಕಳಂಕ
ಕಾರ್ತವೀರ್ಯಾಜುನನ ಕೊಂದ ಭವ್ಯ
ಕೀರ್ತಿ ನಿನ್ನಾನಂದ ವೃಂದ ಸತತ
ಕೀರ್ತಿಸುವ ನರರ ಬಹುಕುಂದ ನೋಡ
ದಾರ್ತನ್ನ ಪೊರೆಯೊ ಗೋವಿಂದ
ದಯದಿಂದ ನೋಡೆನ್ನ ಹರಿಯೆ ಜಗ
ನ್ಮಯನೆ ಜ್ಞಾನಾನಂದ ಸಿರಿಯೆ ಮನೋ
ಭಯವ ಪರಿಹರಿಸಿನ್ನು ಧೊರೆಯೆ ಸರ್ವ
ಭಯದೂರರಿನ್ನೊಬ್ಬರರಿಯೇ
ನರಸಿಂಹ ನಿನ್ನುಳಿದು ಜಗವ ಕಾಯ್ವ
ಪರದೈವರುಂಟೆಂದು ಬಗೆವ ನರರ
ಪರಮೇಷ್ಠಿ ರಾಯನು ನಗುವ ನಿತ್ಯ
ನಿರಯಾಂಧ ಕೂಪದೊಳು ಹುಗಿವ
ದಾಸ ದಾಸರ ದಾಸನೆಂದು ಬಿಡದೆ
ನೀ ಸಲಹೋ ಎನ್ನನೆಂದೆಂದೂ ನಿನ್ನ
ನಾ ಸೇವಿಸುವೆ ಕೃಪಾಸಿಂಧು ಎಮ್ಮನು
ದಾಸೀನ ಮಾಡದಿರು ಬಂಧು
ಎಂದೆಂದು ನೀ ಬಡವನಲ್ಲ ನಿನ್ನ
ಪೊಂದಿದವನ ಬಿಡುವನಲ್ಲ ಹೃದಯ
ಮಂದಿರದೊಳಗೆ ಬಲ್ಯಲ್ಲ ಚಿದಾ
ನಂದ ನೀ ಭಕ್ತ ವತ್ಸಲ
ಕಾಮಿತಪ್ರದನೆಂಬ ಬಿರುದು ಕೇಳಿ
ನಾ ಮುದದಿ ಬಂದೆನೋ ಅರಿದು ಎನ್ನ
ತಾಮಸ ಮತಿಗಳನ್ನು ತರಿದು ಮಮ
ಸ್ವಾಮಿ ನೋಡೆನ್ನ ಕಣ್ತೆರೆದು
ಹಿತವರೊಳು ನಿನಗಧಿಕರಾದ ತ್ರಿದಶ
ತತಿಗಳೊಳು ಕಾಣೆನೋ ಪ್ರಮೋದ ನೀನೆ
ಗತಿಯೆಂದು ನಂಬಿದೆ ವಿವಾದವ್ಯಾಕೊ
ಪತಿತಪಾವನ ತೀರ್ಥಪಾದ
ಮಡದಿ ಮಕ್ಕಳ ತಂದೆ ತಾಯಿ ಎನ್ನ
ಒಡಹುಟ್ಟಿದವರ ನೀ ಕಾಯಿ ಲೋಕ
ದೊಡೆಯ ನೀನಲ್ಲದಿನ್ನಾರೈ ಎನ್ನ
ನುಡಿಯ ಲಾಲಿಸೋ ಶೇಷಶಾಯಿ
ಅನುಬಂಧ ಜನರಿಂದ ಬಪ್ಪ ಕ್ಲೇಶ
ಅನುಭವಿಸಲಾರೆ ಎನ್ನಪ್ಪ ಉದಾ
ಸೀನ ಮಾಡಿ ದಯಮಾಡದಿಪ್ಪರೇನೋ
ಘನ ಮಹಿಮ ಫಣಿರಾಜತಲ್ಪ
ಹದಿನಾಲ್ಕು ಲೋಕಂಗಳಾಳ್ವ ಬ್ರಹ್ಮ
ಮೊದಲಾದವರು ನಿನ್ನ ಚೆಲ್ವನಖದ
ತುದಿ ಬಣ್ಣ ಕಂಡು ಕಡೆ ಬೀಳ್ವದಿಲ್ಲ
ವಿಧಿಸಲಾಪೆನೆ ನಿನ್ನ ಸಲ್ವಾ
ಧನ ಧಾನ್ಯ ಪಶು ಪತ್ನಿ ಗೇಹ ಜನನೀ
ಜನಕ ಜಾಮಾತ ಸಖ ನೇಹ ಅನುಜ
ತನುಜಾಪ್ತವರ್ಗದಿಂದಾಹ ಸೌಖ್ಯ
ನಿನಗರ್ಪಿಸಿದೆ ಎನ್ನ ದೇಹ
ನೀನಿತ್ತ ಸಂಸಾರದೊಳಗೆ ಸಿಲುಕಿ
ನಾ ನೊಂದೆ ಕರೆ ನಿನ್ನ ಬಳಿಗೆ ಚರಣ
ಧ್ಯಾನ ದೊರಕಲು ಭವದಿ ಮುಳುಗೆ ನಿನ್ನ
ಕಾಣದಿರಲಾರೆನರೆಘಳಿಗೆ
ಸಲುಗೆ ಬಿನ್ನಪವ ನೀ ಕೇಳೋ ಎನ್ನ
ಬಲು ದುರುಳತನವ ನೀ ತಾಳೋ ನೀನೆ
ನೆಲೆಯಿಲ್ಲದೆನಗ್ಯಾರು ಪೇಳೋ ಎನ್ನ
ಕುಲದೈವ ಬಹುಕಾಲ ಬಾಳೋ
ಸಾಂದೀಪ ನಂದನನ ತಂದ ನಂದ
ನಂದನನೆ ಎನ್ನ ಭಯವೃಂದ ಕಳೆದು
ಎಂದೆಂದು ಕುಂದದಾನಂದವೀಯೋ
ಇಂದಿರಾರಮಣ ಗೋವಿಂದ
ವಿಶ್ವ ತೈಜಸ ಪ್ರಾಜ್ಞ ತುರಿಯ ಎನ್ನ
ದುಸ್ವಭಾವವ ನೋಡಿ ಪೊರೆಯದಿಹರೆ
ನಿಸ್ಪೃಹ ನಿನ್ನಂಘ್ರಿ ಮೊರೆಯ ಹೊಕ್ಕೆ
ಅಸ್ವತಂತ್ರನ ಕಾಯೋ ಪಿರಿಯ
ಇಹಪರದಿ ಸೌಖ್ಯಪ್ರದಾತ ನೀನೆ
ಅಹುದೋ ಲೋಕೈಕ ವಿಖ್ಯಾತ ಮಹಾ
ಮಹಿಮ ಗುಣಕರ್ಮ ಸಂಜಾತ ದೋಷ
ದಹಿಸು ಸಂಸಾರಾಬ್ಧಿ ಪೋತ
ಲೋಕಬಾಂಧವನೆಂಬ ಖ್ಯಾತಿಯನ್ನು
ನಾ ಕೇಳಿದೆನು ಖಳಾರಾತಿ ಮನೋ
ಶೋಕ ಮೋಹಾಜ್ಞಾನ ಭೀತಿ ಬಿಡಿಸು
ಶ್ರೀ ಕರಾರ್ಚಿತ ಸ್ವಯಂ ಜ್ಯೋತಿ
ಒಂದು ಗೇಣೊಡಲನ್ನಕಾಗಿ ಅಲ್ಪ
ಮಂದಭಾಗ್ಯರ ಮನೆಗೆ ಪೋಗಿ ದೈನ್ಯ
ದಿಂದ ಸತ್ಕರ್ಮಗಳ ನೀಗಿ ಕಂದಿ
ಕುಂದಿದೆನೋ ಸಲಹೋ ಲೇಸಾಗಿ
ಪಾತಕರೊಳಗಧಿಕ ನಾನಯ್ಯ ಜಗ
ತ್ಪಾತಕವ ಕಳೆವ ಮಹಾರಾಯ ನಿನ್ನ
ದೂತ ನಾನಲ್ಲವೆ ಜೀಯ ಜಗ
ನ್ನಾಥ ವಿಠ್ಠಲ ಪಿಡಿಯೋ ಕೈಯಾ
Lyrics Submitted by Vishnupreranaya Vishnupreetyartham

Enjoy the lyrics !!!
Sri Puttur Narasimha Nayak is a Kannada singer, vocalist from Karnataka. He sings devotional songs, chiefly Haridasa compositions, and carnatic classical music. Bhajan singers To his credit, he has rendered in Kannada, mainly devotional songs by Purandara Dasa, Kanaka Dasa, and Kirthanaas, and has given many public concerts all over the world. His Pavamana jagada prana album was extremely popular.

Sri Puttur Narasimha Nayak began to learn music at the age of 14. He took his initial lessons in music from Puttur Devdas Nayak. During 1977 he sang songs for Kannada, Tulu and Konkani films. Films like Kendada Male, Ujwadu and music by L Vaidyanathan, Gauri Ganesha,and Rajan-Nagendra. Puttur Nayak won the award for Best Male Playback Singer at the Karnataka State Film Awards in 1992. He was awarded the Sri Raghavendra award in 2005.[1][citation needed] He can sing in fourteen languages and has sung more than ten thousand devotional, motion picture, and folk songs.[2][3][not in citation given][4] He is a native of Dakshina Kannada district. He lives with his wife and two children in Bangalore. He has performed in more than three thousand concerts across the world.[5] He has toured the USA and Bahrain several times and served as a representative in the Kannada conferences abroad. Read more on Last.fm. User-contributed text is available under the Creative Commons By-SA License; additional terms may apply.

View All

Narasimha Nayak